← Back to Home Portal

ಬೆಥನಿ ಐಟಿಐ ನೆಲ್ಯಾಡಿ ಯಲ್ಲಿ ವೃತ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

Bethany ITI Nellyady Event

ನೆಲ್ಯಾಡಿ: ಬೆಥನಿ ಐಟಿಐ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಪ್ರಮಾಣ ಪತ್ರಗಳನ್ನು ವಿತರಿಸುವ ಸಮಾರಂಭವು ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ರೆ. ಫಾ. ವರ್ಗೀಸ್ ಕೈಪನಡುಕ್ಕ ಓಐಸಿ ವಹಿಸಿ, ಜೀವನದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಮತ್ತು ಪರಿಶ್ರಮವೇ ಪ್ರಮುಖ ಆಧಾರ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. "ಕೌಶಲ್ಯವೇ ನಿಜವಾದ ಶಕ್ತಿ" ಎಂಬ ಸಂದೇಶವನ್ನು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹಂಚಿಕೊಂಡರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಣಾಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶ್ರೀಮತಿ ರಮಣಿ ಬಿ. ಅವರು ಮಾತನಾಡಿ, ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಮೂಲಕ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು. "ಸಾಧನೆಗೆ ಅಸಾಧ್ಯ ಎಂಬುದಿಲ್ಲ" ಎಂಬ ಪ್ರೇರಣಾದಾಯಕ ಸಂದೇಶವನ್ನು ಅವರು ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರೆ. ಫಾ. ಸ್ಯಾಮುವೆಲ್ ಜಾರ್ಜ್ ಓಐಸಿ, ಪ್ರಾಂಶುಪಾಲರಾದ ಸಜಿ ಕೆ. ತೋಮಸ್, ತರಬೇತಿ ಅಧಿಕಾರಿಯಾದ ಶ್ರೀ ಜಾನ್ ಪಿ. ಎಸ್., ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿ ಶ್ರೀ ಜಾನ್ಸನ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

"Every certificate represents not just the successful completion of a course, but also the beginning of a journey filled with responsibility and opportunity. I congratulate all our students on their achievement and encourage them to uphold the values of discipline, honesty, and excellence in their professional lives..."

Fr. Samuel George OIC Director, Bethany ITI, Nellyady

ಸಮಾರಂಭವು ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀ ಜಾನ್ ಪಿ. ಎಸ್. ಅವರು ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಸ್ಥೆಯ ಉಪನ್ಯಾಸಕರಾದ ಹರಿಪ್ರಸಾದ್ ರೈ ಅವರು ನಿರೂಪಿಸಿದರು. ಕೊನೆಯಲ್ಲಿ ಸಂಸ್ಥೆಯ ಉಪನ್ಯಾಸಕರಾದ ಅನಂತಕೃಷ್ಣ ಅವರು ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮವನ್ನು ಸಮಾಪಿಸಿದರು.